ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಹೊಸ ಪೋಸ್ಟ್

ಆಮ್‌ ಆದ್ಮಿ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಮಾನ್ಯತೆ. ರಾಷ್ಟ್ರೀಯ ಪಕ್ಷ ಆಗಿದ್ದು ಹೇಗೆ?

ಬಿಜೆಪಿ ಮತ್ತು ಕಾಂಗ್ರೆಸ್​ಗೆ ತೀವ್ರ ಪೈಪೋಟಿ ನೀಡುವ ಆಮ್​ ಆದ್ಮಿ ಪಕ್ಷ ಎದುರಾಗಿದ್ದು, ಹಿಮಾಚಲ ಪ್ರದೇಶ ಮತ್ತು ಗುಜರಾತ್ ಚುನಾವಣೆ ನಂತರ ಇದು ಕೂಡ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ. ರಾಷ್ಟ್ರೀಯ ಪಕ್ಷವೆಂದರೆ ಒಂದು ಪಕ್ಷವು ರಾಷ್ಟ್ರೀಯವಾಗಿ ಅಸ್ತಿತ್ವವನ್ನು ಹೊಂದಿದೆ ಎಂದರ್ಥ. ಪ್ರಾದೇಶಿಕವಾಗಿ ಹುಟ್ಟಿಕೊಂಡ ಒಂದು ಪಕ್ಷವು ರಾಷ್ಟ್ರೀಯ ಪಕ್ಷದ ಮಾನ್ಯತೆಯನ್ನು ಪಡೆದುಕೊಳ್ಳುವುದು ಅಷ್ಟೊಂದು ಸುಲಭವಲ್ಲ. ಕೇವಲ 10 ವರ್ಷಗಳಲ್ಲಿ ದೆಹಲಿಯಲ್ಲಿ 2 ಬಾರಿ ಅಧಿಕಾರ, ಪಂಜಾಬ್‌ನಲ್ಲಿ ಸರಕಾರ ರಚನೆ, ಗೋವಾದಲ್ಲಿ 2 ಸೀಟು ಗಳಿಕೆ, ಅಭೂತಪೂರ್ವ ಗೆಲುವಿನ ಮೂಲಕ  ದೆಹಲಿ ಮಹಾನಗರ ಪಾಲಿಕೆ ಯಲ್ಲಿ ಪಾರಮ್ಯ, ಮೊನ್ನೆಯ ಗುಜರಾತ್‌ ಚುನಾವಣೆಯಲ್ಲಿ 5 ಸೀಟು - ಇದು  ಆಮ್​ ಆದ್ಮಿ ಪಕ್ಷ ದ  ಹೆಗ್ಗಳಿಕೆ. ಪ್ರಸ್ತುತ  ದೆಹಲಿ ಯ ಆಮ್‌ ಆದ್ಮಿ ಕಚೇರಿ ಮುಂಭಾಗದಲ್ಲಿ ದೊಡ್ಡ ಫ್ಲೆಕ್ಸ್‌ ತೂಗಿಬಿದ್ದಿದೆ. 'ಆಮ್‌ ಆದ್ಮಿ ಪಕ್ಷವನ್ನು ರಾಷ್ಟ್ರೀಯ ಪಕ್ಷವನ್ನಾಗಿಸಿದ ಎಲ್ಲ ದೇಶವಾಸಿಗಳಿಗೂ ಅಭಿನಂದನೆಗಳು'! ಆಮ್​ ಆದ್ಮಿ ಪಕ್ಷ  ಈಗ 9ನೇ ರಾಷ್ಟ್ರೀಯ ಪಕ್ಷ ಚುನಾವಣಾ ಆಯೋಗದ ಪ್ರಕಾರ, ದೇಶದಲ್ಲಿ 3 ವಿಧದ ಪಕ್ಷಗಳಿವೆ. ರಾಷ್ಟ್ರೀಯ, ರಾಜ್ಯ ಮತ್ತು ಪ್ರಾದೇಶಿಕ ಪಕ್ಷಗಳು. ಒಟ್ಟು 2858 ರಾಜಕೀಯ ಪಕ್ಷಗಳು ನೋಂದಾಯಿಸಲ್ಪಟ್ಟಿವೆ. ಈ ಪೈಕಿ ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆದಿರುವುದು ಕೇವಲ 8 ಪಕ್ಷಗಳು: ಕಾಂಗ್ರೆಸ್‌, ಬಿಜೆಪಿ, ಬಿಎಸ್ಪಿ, ಸಿಪಿಐ, ಸಿಪಿಎಂ,
ಇತ್ತೀಚಿನ ಪೋಸ್ಟ್‌ಗಳು

ದೆಹಲಿಯಲ್ಲಿ ಪ್ಲಾಸ್ಮಾ ಬ್ಯಾಂಕ್. ದೇಶದ ಮೊದಲ ಪ್ಲಾಸ್ಮಾ ಬ್ಯಾಂಕ್ ವಿವರಣೆ ಮತ್ತು ಚಿತ್ರಗಳು

ಕೊರೊನಾ ವೈರಸ್ ಸೋಂಕಿತ ರೋಗಿಗಳ ಚಿಕಿತ್ಸೆಗೆ ಸಹಾಯಕವಾಗಲು ದೆಹಲಿ ಸರ್ಕಾರ ಪ್ಲಾಸ್ಮಾ ಬ್ಯಾಂಕ್ ಸ್ಥಾಪನೆ ಮಾಡಿದೆ. ದೇಶದಲ್ಲಿಯೇ ಮೊದಲು ಇಂತಹ ಬ್ಯಾಂಕ್ ಸ್ಥಾಪನೆ ಮಾಡಲಾಗಿದೆ. ಕೋವಿಡ್ - 19 ಸೋಂಕಿನಿಂದ ಗುಣಮುಖರಾದವರು ಪ್ಲಾಸ್ಲಾ ದಾನ ಮಾಡಬಹುದು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗುರುವಾರ ಪತ್ರಿಕಾಗೋಷ್ಠಿ ನಡೆಸಿದರು. "ಜನರು ಬೇರೆಯವರ ಜೀವ ಉಳಿಸಲು ಪ್ಲಾಸ್ಮಾ ಬ್ಯಾಂಕ್‌ಗೆ ಪ್ಲಾಸ್ಮಾ ದಾನ ಮಾಡಬೇಕು. ದೆಹಲಿ ಜನರು ಬೇರೆಯವರ ಜೀವ ಉಳಿಸಲು ಇದು ಉತ್ತಮ ಅವಕಾಶ" ಎಂದು ಹೇಳಿದರು.  "ಯಾವುದೇ ವ್ಯಕ್ತಿ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖವಾಗಿದ್ದರೆ ಮತ್ತು 14 ದಿನದ ಐಸೋಲೇಷನ್ ಪೂರ್ಣಗೊಳಿಸಿದ್ದರೆ ಇನ್ನೊಬ್ಬರ ಜೀವ ಉಳಿಸಲು ಪ್ಮಾಸ್ಲಾ ದಾನ ಮಾಡಬಹುದು. ಜನರು 1031 ನಂಬರ್‌ಗೆ ಕರೆ ಮಾಡಿ ಪ್ಲಾಸ್ಮಾ ದಾನ ಮಾಡುವ ಬಗ್ಗೆ ಮಾಹಿತಿ ನೀಡಬಹುದು" ಎಂದರು. ಪ್ಮಾಸ್ಮಾ ದಾನ ಮಾಡಲು ಏನು ಮಾಡಬೇಕು? "ಜನರು ಪ್ಲಾಸ್ಮಾ ದಾನ ಮಾಡಲು ಬಯಸಿದರೆ 1031 ನಂಬರ್‌ಗೆ ಕರೆ ಮಾಡಬಹುದು ಅಥವ 8800007722 ನಂಬರ್‌ಗೆ ವಾಟ್ಸಪ್ ಸಂದೇಶ ಕಳಿಸಬಹುದು. ಬಳಿಕ ವೈದ್ಯರು ಅವರನ್ನು ಸಂಪರ್ಕಿಸುತ್ತಾರೆ" ಎಂದು ಅರವಿಂದ ಕೇಜ್ರಿವಾಲ್ ಹೇಳಿದರು. ಯಾರು ಪ್ಲಾಸ್ಮಾ ದಾನ ಮಾಡಬಹುದು? "ನೀವು ಕೋವಿಡ್ - 19 ಸೋಂಕಿನಿಂದ ಗುಣಮುಖರಾಗಿದ್ದು 18 ರಿಂದ 60 ವರ್ಷದವರಾಗಿದ್ದರೆ ಪ್ಲಾಸ್ಮಾ

ಖಾಸಗಿ ಆಸ್ಪತ್ರೆಗಳು 20% ಹಾಸಿಗೆಗಳನ್ನು ಕೊರೊನಾ ರೋಗಿಗಳಿಗೆ ಮೀಸಲಿಡಬೇಕು: ಅರವಿಂದ್ ಕೇಜ್ರಿವಾಲ್

ದೆಹಲಿಯ ಖಾಸಗಿ ಆಸ್ಪತ್ರೆಗಳು ತಮ್ಮ 20% ಹಾಸಿಗೆಗಳನ್ನು ಕೊರೊನಾ ವೈರಸ್‌ ರೋಗಿಗಳಿಗೆ ಮೀಸಲಿಡಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆದೇಶಿಸಿದ್ದಾರೆ. ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ದೆಹಲಿಯಲ್ಲಿ ಒಟ್ಟು 117 ಖಾಸಗಿ ಆಸ್ಪತ್ರೆಗಳಿವೆ. ಅವುಗಳಲ್ಲಿನ ಹಾಸಿಗೆಗಳಲ್ಲಿ ಕರೋನವೈರಸ್ ರೋಗಿಗಳಿಗೆ ಶೇ 20 ರಷ್ಟು ಹಾಸಿಗೆಗಳನ್ನು ಕಾಯ್ದಿರಿಸಲು ತಿಳಿಸಲಾಗಿದೆ ಎಂದಿದ್ದಾರೆ. “ಕೋವಿಡ್-19 ಚಿಕಿತ್ಸೆಗೆ ಹೋಗುವವರಿಗೆ ಇಂದಿನಿಂದ ಖಾಸಗಿ ಆಸ್ಪತ್ರೆಗಳಲ್ಲಿಯೂ ಸಹ 2,000 ಹೊಸ ಹಾಸಿಗೆಗಳು ಲಭ್ಯವಿರುತ್ತವೆ” ಅವುಗಳನ್ನು ಬಳಸಬಹುದು ಎಂದು ಕೇಜ್ರಿವಾಲ್‌ ತಿಳಿಸಿದ್ದಾರೆ. ಲಾಕ್‌ಡೌನ್‌ನಲ್ಲಿನ ಸಡಿಲತೆ ಕಾರಣ ದೆಹಲಿಯಲ್ಲಿ  ಕೋವಿಡ್ -19 ಪ್ರಕರಣಗಳು ಹೆಚ್ಚಿವೆ. ಆದರೆ ಮರಣ ಪ್ರಮಾಣ ಅಥವಾ ಗಂಭೀರ ಪ್ರಕರಣಗಳ ಸಂಖ್ಯೆ ವೇಗವಾಗಿ ಏರಿಕೆಯಾಗದಿದ್ದರೆ ಚಿಂತೆ ಇಲ್ಲ. ಜನರು ವೈರಸ್‌ಗೆ ತುತ್ತಾಗಿ ಚೇತರಿಸಿಕೊಂಡರೆ, ಚಿಂತೆ ಮಾಡಲು ಏನೂ ಇಲ್ಲ ಅವರು ತಿಳಿಸಿದ್ದಾರೆ. ಕೋವಿಡ್ -19 ಪ್ರಕರಣಗಳು ನಿಧಾನವಾಗಿ ಹೆಚ್ಚುತ್ತಿವೆ ಎಂದು ನಾನು ಒಪ್ಪಿಕೊಂಡರೂ ದೆಹಲಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಹೆಚ್ಚಿನ ಪ್ರಕರಣಗಳಲ್ಲಿ ಸೌಮ್ಯ ಲಕ್ಷಣಗಳಿವೆ ಅಥವಾ ಲಕ್ಷಣರಹಿತವಾಗಿದೆ. ಹಾಗಾಗಿ ಅಂತವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿಯಲ್ಲಿ ಕೊರೊನಾ ವಿರುದ್ಧ ಅಪರೇಷನ್ ಶೀಲ್ಡ್ (S.H.I.E.L.D.)

ಕೊರೊನಾ ರುದ್ರ ಕುಣಿತಕ್ಕೆ, ಮಿಂಚಿನ ಓಟಕ್ಕೆ  ರಾಷ್ಟ್ರ ರಾಜಧಾನಿ ದೆಹಲಿ ಯಲ್ಲಿ  ಬ್ರೇಕ್ ಹಾಕಲು ಮುಂದಾಗಿರುವ ಕೇಜ್ರಿವಾಲ್ ಸರ್ಕಾರ ಆಪರೇಷನ್ ಶೀಲ್ಡ್ ಔಟ್ ಆರಂಭಿಸಿದ್ದು, ಆರು ಸೂತ್ರಗಳನ್ನು ಜಾರಿ ತರಲು ಮುಂದಾಗಿದೆ.  ಅಲ್ಲೊಂದು, ಇಲ್ಲೊಂದು ಪ್ರಕರಣ ಎಂದುಕೊಂಡು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ  ‌ ಹಿಡಿತದಲ್ಲಿದ್ದೆ.  ಈವರೆಗೂ 720 ಪ್ರಕರಣಗಳು ಪತ್ತೆಯಾಗಿದ್ದು,  12 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ 450ಕ್ಕೂ ಹೆಚ್ಚು ಕೇಸ್‍ಗಳು ಮರ್ಕಜ್ ಮೂಲದ್ದು ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಕೊರೋನಾ ಸೋಂಕಿನ ಸಂಖ್ಯೆ ಕೈ ಮೀರಿ ಆಕಾಶದೆತ್ತರಕ್ಕೆ ಬೆಳೆಯದ್ದಂತೆ ದೆಹಲಿ ಸರ್ಕಾರ, ರಾಷ್ಟ್ರ ರಾಜಧಾನಿಯಲ್ಲಿ 100 ಪರ್ಸೆಂಟ್ ಸೀಲ್ಡ್ ಮಾದರಿಯನ್ನು ಜಾರಿಗೆ ತಂದಿದೆ.  ದೆಹಲಿಯಲ್ಲಿ 25 ಪ್ರದೇಶಗಳನ್ನು ಹಾಟ್‍ಸ್ಪಾಟ್ ಗಳನ್ನು ಗುರುತಿಸಿದ್ದು. ಈ ಪ್ರದೇಶದಲ್ಲಿ ಆಪರೇಷನ್ ಶೀಲ್ಡ್ ಘೋಷಣೆ ಮಾಡಿದ್ದಾರೆ. ಕೊರೊನಾ ವಿರುದ್ಧ ಆಪರೇಷನ್ ಶೀಲ್ಡ್ ಘೋಷಿಸಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆರು ಸೂತ್ರಗಳನ್ನು ಜಾರಿಗೆ ತರಲು ಸಿದ್ಧವಾಗಿದ್ದಾರೆ.  1 .  ಮೊದಲ ಸೂತ್ರದ ಮೂಲಕ ಇಡೀ ಪ್ರದೇಶವನ್ನು ಸೀಲ್ ಮಾಡುವುದು ಮತ್ತು ಸೋಂಕಿತ ಪ್ರದೇಶವನ್ನು ಮ್ಯಾಪಿಂಗ್ ಮಾಡುವುದು. 2.  ಸೀಲ್ ಮಾಡಿರುವ ಪ್ರದೇಶದಲ್ಲಿರುವ ಎಲ್ಲ ಜನರು ಮನೆಯಲ್ಲೇ ಇರುವುದು ಕಡ್ಡಾಯ 3.  ಈ ತಂತ್ರದಲ್ಲಿ ಸೋಂಕಿತ ವ್ಯಕ್ತಿಯ ಮೊದಲ ಮತ್ತು ಎರಡನೇ ಹಂತ

ಕೊರೋನಾವನ್ನು ಹೇಗೆ ಎದುರಿಸುತ್ತೆ ದೆಹಲಿ? ಅರವಿಂದ್ ಕೇಜ್ರೀವಾಲ್ ಅವರ ಫುಲ್ ಪ್ಲಾನ್ ರೆಡಿ

ರಾಜಧಾನಿ ದೆಹಲಿಯಲ್ಲಿ ಕೊರೋನಾ ನಿಯಂತ್ರಣಕ್ಕೇನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುವುದನ್ನು ಸಿಎಂ ಅರವಿಂದ್ ಕೇಜ್ರೀವಾಲ್ ಬಹಿರಂಗಪಡಿಸಿದ್ದಾರೆ.  ದೆಹಲಿ ಸರ್ಕಾರ 5T ಹೆಸರಿನ ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಇದರಲ್ಲಿ ಟೆಸ್ಟಿಂಗ್, ಟ್ರೇನಿಂಗ್, ಟ್ರೇಸಿಂಗ್, ಟ್ರೀಟ್ಮೆಂಟ್, ಟೀಂ ವರ್ಕ್ ಹಾಗೂ ಟ್ರ್ಯಾಕಿಂಗ್ ಆಂಡ್ ಮಾನಿಟರಿಂಗ್ ಕೂಡಾ ಶಾಮೀಲಾಗಿದೆ. ಅಲ್ಲದೇ ದೆಹಲಿಯಲ್ಲಿ ಮುನ್ನೂರು ಸೋಂಕಿತರಿದ್ದರೂ ಚಿಕಿತ್ಸೆ ನೀಡಲು ಸರ್ಕಾರ ಸಂಪೂರ್ಣ ಸಜ್ಜಾಗಿದೆ ಎಂದು ಕೇಜ್ರೀವಾಲ್ ತಿಳಿಸಿದ್ದಾರೆ. ಸದ್ಯ ಇಲ್ಲಿ ಐನೂರು ಸೋಂಕಿತರಿದ್ದು, ವೈದ್ಯರು ಹಾಗೂ ದಾದಿಯರೇ ಈ ಸಮರದ ಬಹುಮುಖ್ಯ ಯೋಧರೆಂದು ತಿಳಿಸಿದ್ದಾರೆ.  ವಿಡಿಯೋ ಸಂದೇಶದಲ್ಲಿ ಈ ಮಾಹಿತಿ ನೀಡಿರುವ ಅರವಿಂದ್ ಕೇಜ್ರೀವಾಲ್ ನಾವು ಕೊರೋನಾಗಿಂತ ಮೂರು ಹೆಜ್ಜೆ ಮುಂದಿರಬೇಕು. ನಿದ್ದೆ ಮಾಡುತ್ತಾ ಉಳಿದರೆ ಇದನ್ನು ನಿಯಂತ್ರಿಸೋದು ಅಸಾಧ್ಯ ಎಂದಿದ್ದಾರೆ.  ಟೆಸ್ಟಿಂಗ್ : ಟೆಸ್ಟಿಂಗ್ ನಡೆಯದೆ ಕೊರೋನಾ ಸೋಂಕು ಇದೆಯೋ ಇಲ್ಲವೋ ಎಂದು ತಿಳಿಯುವುದಿಲ್ಲ. ಹೀಗಾಗಿ ಟೆಸ್ಟಿಂಗ್ ಅತೀ ಅಗತ್ಯ ಎಂದಿದ್ದಾರೆ.  ಟ್ರೇಸಿಂಗ್ : ಕೊರೋನಾ ಸೋಂಕಿತ ಹದದಿನಾಲ್ಕು ದಿನಗಳಲ್ಲಿ ಯಾರು ಯಾರನ್ನು ಬೇಟಿಯಾದ. ಅವರೆಲ್ಲರನ್ನೂ ಟ್ರೇಸ್ ಮಾಡಲಾಗುತ್ತದೆ. ಅವರನ್ನು ಕ್ವಾರಂಟೈನ್ ಮಾಡಲಾಗುತ್ತದೆ. ಇದಕ್ಕೆ ಪೊಲೀಸರೂ ಸಹಾಯ ಮಾಡುತ್ತಿದ್ದಾರೆ ಎಂದು ಕೇಜ್ರೀವಾಲ್ ತಿಳಿಸಿದ್ದಾರೆ.  ಟ್ರೀಟ್ಮೆಂಟ್ :

ಮೆಲಾನಿಯಾ ಭೇಟಿ ನೀಡಿದ್ದ ದೆಹಲಿ ಸರ್ಕಾರಿ ಶಾಲೆಯ 'ಹ್ಯಾಪಿನೆಸ್‌ ಕ್ಲಾಸ್‌'ಗಳು ವಿಶ್ವದ ಗಮನ ಸೆಳೆಯುತ್ತಿರುವುದೇಕೆ?

ಅಮೆರಿಕದ ಫಸ್ಟ್‌ ಲೇಡಿ ಮೆಲಾನಿಯಾ ಟ್ರಂಪ್‌ ಅವರು ದಿಲ್ಲಿಯ ಶಾಲೆಯೊಂದರ 'ಸಂತೋಷದ ತರಗತಿ'ಗೆ ಮಂಗಳವಾರ ಭೇಟಿ ನೀಡಿದರು. ಒತ್ತಡಮುಕ್ತ ಕಲಿಕೆಯ ಉದ್ದೇಶದಿಂದ ರೂಪುಗೊಂಡಿರುವ 'ಹ್ಯಾಪಿನೆಸ್‌ ಕ್ಲಾಸ್‌'ಗಳು ದೇಶ- ವಿದೇಶದ ತಜ್ಞರ ಗಮನ ಸೆಳೆಯುತ್ತಿವೆ. ದಕ್ಷಿಣ ದಿಲ್ಲಿಯ ಮೋತಿಬಾಗ್‌ನ ಸರ್ವೋದಯ ಕೋ ಎಜುಕೇಶನ್‌ ಸೀನಿಯರ್‌ ಸೆಕೆಂಡರಿ ಸ್ಕೂಲ್‌ಗೆ ಮಂಗಳವಾರ ವಿಶೇಷ ಭೇಟಿ ನೀಡಿದ ಮೆಲಾನಿಯಾ ಟ್ರಂಪ್‌, ಅಲ್ಲಿ ನಡೆಯುವ 'ಹ್ಯಾಪಿನೆಸ್‌ ಕ್ಲಾಸ್‌'ನ್ನು ವೀಕ್ಷಿಸಿದರು. ಶಾಲೆಯ ಮಕ್ಕಳು ಅವರನ್ನು ಆರತಿಯೆತ್ತಿ ತಿಲಕವಿಟ್ಟು ಬರಮಾಡಿಕೊಂಡರು. 45 ನಿಮಿಷಗಳ ಕ್ಲಾಸ್‌ ಚಟುವಟಿಕೆಯನ್ನು ಪೂರ್ತಿಯಾಗಿ ವೀಕ್ಷಿಸಿದ ಮೆಲಾನಿಯಾ, ತರಗತಿಯ ಬಗ್ಗೆ ಮಕ್ಕಳ ಅಭಿಪ್ರಾಯ ಪಡೆದುಕೊಂಡರು. ಕೆಲವು ಮಕ್ಕಳ ಪ್ರಾಜೆಕ್ಟ್ ವರ್ಕ್ ವೀಕ್ಷಿಸಿದರು. ಕೆಲವು ಮಕ್ಕಳೊಡನೆ ಮುಕ್ತವಾಗಿ ಹರಟಿದರು. ಒಂದು ಗಂಟೆಯ ಶಾಲೆ ಭೇಟಿಯ ಬಳಿಕ ಹೊರಟು ನಿಂತಾಗ ಅವರು ಹೇಳಿದ ಮಾತು: ''ಇಲ್ಲಿರುವ ಮಕ್ಕಳು ಪ್ರತಿದಿನದ ಮುಂಜಾನೆಯನ್ನು ಕತೆ ಹೇಳುವುದು, ಪ್ರಕೃತಿಯೊಡನೆ ಸಂಭಾಷಿಸುವುದರ ಮೂಲಕ ನೆಮ್ಮದಿಯಿಂದ ಆರಂಭಿಸುತ್ತಾರೆ. ಇದು ತುಂಬ ಸ್ಫೂರ್ತಿ ನೀಡುವಂಥದು. ನಮ್ಮ ದಿನವನ್ನು ಇದಕ್ಕಿಂತ ಅರ್ಥಪೂರ್ಣವಾಗಿ ಸ್ವಾಗತಿಸುವುದನ್ನು ನಾನು ಊಹಿಸಲಾರೆ.'' ತೆರಳುವ ಮುನ್ನ, ಮಕ್ಕಳಲ್ಲಿಉತ್ತಮ ಮೌಲ್ಯಗಳನ್ನು ಬೆಳೆಸುತ್ತಿರುವುದಕ್ಕಾಗಿ ಶಿಕ್

ದೆಹಲಿ ಜನ ಅಭಿವೃದ್ಧಿಗೆ ಬೆಂಬಲಿಸಿದ್ದು ಯಾಕೆ!?

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮತ್ತೆ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ. ಚುನಾವಣಾ ಆಯೋಗ ದೆಹಲಿಯ 70 ಕ್ಷೇತ್ರಗಳ ಚುನಾವಣಾ ಫಲಿತಾಂಶವನ್ನು ಪ್ರಕಟಿಸಿದ್ದು, ಆಡಳಿತಾರೂಢ ಆಪ್ 62 , ಬಿಜೆಪಿ 08 , ಹಾಗೂ ಕಾಂಗ್ರೆಸ್ ಶೂನ್ಯ ಕ್ಷೇತ್ರಗಳಲ್ಲಿ ಜಯ ದಾಖಲಿಸಿವೆ.  ಈ ಮೂಲಕ ಆಪ್ ಮತ್ತೆ ಅಧಿಕಾರ ಪಡೆದಿದ್ದು, ಬಿಜೆಪಿ ಪ್ರಮುಖ ಪ್ರತಿಪಕ್ಷವಾಗಿ ಹೊರ ಹೊಮ್ಮಿದೆ. ಆದರೆ ಕಾಂಗ್ರೆಸ್ ಶೂನ್ಯ ಸ್ಥಾನ ಗಳಿಸುವ ಮೂಲಕ ದೆಹಲಿಯಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಸತತ ಮೂರನೇ ಬಾರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ದೆಹಲಿ ಗದ್ದುಗೆ ಪಡೆದಿದ್ದು ಹೇಗೆ ಎಂಬುದರ ಕುರಿತು ಇದೀಗ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಜನಪ್ರಿಯತೆಯನ್ನು ಮೀರಿ ಅರವಿಂದ್ ಕೇಜ್ರಿವಾಲ್ ಜಯಗಳಿಸಿದ್ದಕ್ಕೆ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಕಾರಣ ಏನು ಎಂಬುವುದರ ವಿವರ ಇಲ್ಲಿದೆ. ಸರಳ ಹಾಗೂ ಸ್ವಚ್ಛ ಆಡಳಿತ ದೆಹಲಿ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿದ್ದಾಗ ಭ್ರಷ್ಟಾಚಾರದ ವಿರುದ್ಧ ಆರಂಭಗೊಂಡ ಅಣ್ಣ ಹಜಾರೆ ಹೋರಾಟದಲ್ಲಿ ಹುಟ್ಟಿಕೊಂಡ ಪಕ್ಷ ಆಮ್ ಆದ್ಮಿ ಪಾರ್ಟಿ. ಆರಂಭದಲ್ಲಿಯೇ ತಮ್ಮ ವಿಭಿನ್ನ ಶೈಲಿಯ ರಾಜಕಾರಣದಲ್ಲಿ ಗಮನ ಸೆಳೆದವರು ಆಮ್ ಆದ್ಮಿಗಳು. ಸರಳ ಹಾಗೂ ಸ್ವಚ್ಛ ಆಡಳಿತದ ಭರವಸೆಯ

ನಂ 1 ಸ್ಥಾನದಲ್ಲಿ ದೆಹಲಿ ಸರ್ಕಾರಿ ಶಾಲೆ, ಭಾರತದ ಟಾಪ್ 10 ಶ್ರೇಯಾಂಕದಲ್ಲಿ ಇನ್ನೆರಡು ಸರ್ಕಾರಿ ಶಾಲೆ

ದೆಹಲಿಯ ಮೂರು ಶಾಲೆಗಳು ದೇಶದ ಉನ್ನತ 10 ಸರ್ಕಾರಿ ಶಾಲೆಗಳ ಪಟ್ಟಿಯಲ್ಲಿ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದ್ದು, ಅದರಲ್ಲಿ ಒಂದು ಶಾಲೆ ಪ್ರಥಮ ಸ್ಥಾನ ಪಡೆದಿದೆ.  ದ್ವಾರಕಾ ಸೆಕ್ಟರ್ 10ರ ರಾಜ್ಕಿಯಾ ಪ್ರತಿಭಾ ವಿಕಾಸ್ ವಿದ್ಯಾಲಯ (ಆರ್‌ಪಿವಿವಿ) ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ಕಳೆದ ವಾರ ಎಜುಕೇಶನ್ ವರ್ಲ್ಡ್ ಎಂಬ ಶೈಕ್ಷಣಿಕ ಪೋರ್ಟಲ್ ‘ಇಂಡಿಯನ್ ಸ್ಕೂಲ್ ರ‍್ಯಾಂಕಿಂಗ್‌ 2019’ ಯಲ್ಲಿ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ . ಎಜುಕೇಶನ್ ವರ್ಲ್ಡ್ ಅನ್ನು ದೇಶಾದ್ಯಂತ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಬಳಸುತ್ತಿದ್ದಾರೆ.  ದ್ವಾರಕಾ ಸೆಕ್ಟರ್ 10ರ ರಾಜ್ಕಿಯಾ ಪ್ರತಿಭಾ ವಿಕಾಸ್ ವಿದ್ಯಾಲಯ (ಆರ್‌ಪಿವಿವಿ) ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದರೆ, ಆರ್‌ಪಿವಿವಿ ಲಜಪತ್ ನಗರ ಐದನೇ ಸ್ಥಾನಕ್ಕೆ ಏರಿದೆ. ಆರ್‌ಪಿವಿವಿ ರೋಹಿಣಿ ಏಳನೇ ಸ್ಥಾನ ಪಡೆದಿದೆ.  ಇಂಡಿಯನ್ ಸ್ಕೂಲ್ ರ‍್ಯಾಂಕಿಂಗ್‌ 2019 ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಮೂರೂ ಶಾಲೆಗಳ ಶಿಕ್ಷಕರ ಮತ್ತು ಪ್ರಾಂಶುಪಾಲರ ಶ್ರಮವನ್ನು ಅಭಿನಂದಿಸಿದರು ಮತ್ತು ತಮ್ಮ ಆಡಳಿತದಲ್ಲಿ ದೆಹಲಿ ಸರ್ಕಾರವು ಶಿಕ್ಷಣ ಮತ್ತು ಸರ್ಕಾರಿ ಶಾಲೆಯನ್ನು ಮೊದಲ ಆದ್ಯತೆಯನ್ನಾಗಿ ಮಾಡಿದೆ ಎಂದು ಹೇಳಿದರು.

ಉನ್ನತ ಶ್ರೇಣಿ ಪಡೆದ ಸರ್ಕಾರಿ ವಿದ್ಯಾರ್ಥಿಗಳಿಗೆ ದೆಹಲಿ ಸರ್ಕಾರದಿಂದ ಟ್ಯಾಬ್

ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ದೆಹಲಿ ಸರ್ಕಾರ ಟ್ಯಾಬ್ ಲೆಟ್ ಹಾಗೂ ಕಂಪ್ಯೂಟರ್ ಗಳನ್ನು ವಿತರಣೆ ಮಾಡಿದೆ.  ಪ್ರತಿಭಾ ವಿಕಾಸ್ ವಿದ್ಯಾಲಯಗಳ 11 ಹಾಗೂ 12 ನೇ ತರಗತಿ ವಿದ್ಯಾರ್ಥಿಗಳು ಹಾಗೂ ನಗರ ಸರ್ಕಾರಿ ಶಾಲೆಗಳ 10 ನೇ ತರಗತಿಯಲ್ಲಿ ಶೇ.80 ರಷ್ಟು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವ ಮನೀಷ್ ಸಿಸೋಡಿಯಾ ಟ್ಯಾಬ್ ಹಾಗೂ ಕಂಪ್ಯೂಟರ್ ನ್ನು ವಿತರಿಸಿದ್ದಾರೆ.  21 ನೇ ಶತಮಾನದಲ್ಲಿ ಪ್ರತಿ ವಿದ್ಯಾರ್ಥಿಗಳ ಕೈಯಲ್ಲಿಯೂ ತಂತ್ರಜ್ಞಾನ ಇರಬೇಕು ಎಂದು ಶಿಕ್ಷಣ ಸಚಿವ ಮನೀಷ್ ಸಿಸೋಡಿಯಾ ಹೇಳಿದ್ದಾರೆ.  

ದೆಹಲಿಯಲ್ಲಿ 11,000 ಕಡೆ ಉಚಿತ ವೈಫೈ ಸೌಲಭ್ಯ

ವೈಫೈ ಹಾಟ್‌ಸ್ಪಾಟ್‌ಗಳ ಮೂಲಕ ನಿತ್ಯವೂ 1.5 ಜಿಬಿವರೆಗೂ ಡೇಟಾದ ಉಚಿತ ಅಂತರ್ಜಾಲ ಸೌಲಭ್ಯ ಒದಗಿಸುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಪ್ರಕಟಿಸಿದರು.  ಈ ಸವಲತ್ತಿನ ಮೂಲಕ ನಮ್ಮ ಪ್ರಣಾಳಿಕೆಯ ಕೊನೆಯ ಭರವಸೆಯನ್ನು ಪೂರ್ಣಗೊಳಿಸುತ್ತಿದ್ದೇವೆ. ಈ ಯೋಜನೆಯು ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂದು ತಿಳಿಸಿದರು.  ರಾಷ್ಟ್ರದ ರಾಜಧಾನಿಯಾದ್ಯಂತ ಸುಮಾರು 11,000 ಹಾಟ್‌ಸ್ಪಾಟ್‌ಗಳನ್ನು ಅಳವಡಿಸಲು ಸರ್ಕಾರ ಉದ್ದೇಶಿಸಿದೆ. ಡಿ.16ರ ವೇಳೆಗೆ 100 ಹಾಟ್‌ಸ್ಪಾಟ್‌ಗಳನ್ನು ಅಳವಡಿಸಲಾಗುವುದು. ನಂತರ ಪ್ರತಿ ವಾರ 500 ಹಾಟ್‌ಸ್ಪಾಟ್‌ಗಳನ್ನು ಅಳವಡಿಸಲಾಗುವುದು. ಎಲ್ಲ ಹಾಟ್‌ಸ್ಪಾಟ್‌ಗಳನ್ನೂ ಆರು ವಾರದ ಒಳಗೆ ಅಳವಡಿಸಲಾಗುತ್ತದೆ ಎಂದು ತಿಳಿಸಿದರು.  ಈ ಉದ್ದೇಶಕ್ಕಾಗಿ ಆಪ್ ಒಂದನ್ನು ಸಿದ್ಧಪಡಿಸಲಾಗುತ್ತಿದೆ. ಪ್ರೆಸ್ಟೋ ಎಂಬ ಕಂಪೆನಿ ಈ ಯೋಜನೆಯನ್ನು ನಿರ್ವಹಿಸುತ್ತಿದೆ. ದೆಹಲಿಯಾದ್ಯಂತ ಉಚಿತ ಇಂಟರ್ನೆಟ್ ಒದಗಿಸುವ ಈ ಯೋಜನೆಗೆ 100 ಕೋಟಿ ರೂ ವೆಚ್ಚ ತಗಲುತ್ತದೆ ಎಂದು ವಿವರಿಸಿದರು. ಇದರಿಂದ ದೆಹಲಿಯ ನಿವಾಸಿಗಳು ತಿಂಗಳಿಗೆ 15 ಜಿಬಿ ಡೇಟಾ ಪಡೆದುಕೊಳ್ಳಲಿದ್ದಾರೆ. 4,000 ಹಾಟ್‌ಸ್ಪಾಟ್‌ಗಳು ಬಸ್ ನಿಲ್ದಾಣಗಳಲ್ಲಿ ಲಭ್ಯವಾಗಲಿವೆ. ಇನ್ನು 7,000 ಮಾರುಕಟ್ಟೆ, ನಿವಾಸಿ ಅಭಿವೃದ್ಧಿ ಸಂಸ್ಥೆಗಳು ಮತ್ತು ನಗರದ ಇತರೆ ಸ್ಥಳಗಳಲ್ಲಿ ಸಿಗಲಿವೆ ಎಂದರು.  ಕನಿಷ್ಠ ಡೇಟಾ ಬಳಕೆಯು ಜನರ

ದೆಹಲಿಯಲ್ಲಿ 26.60 ಲಕ್ಷ ಆಮ್ ಆದ್ಮಿಗಳಿಗೆ ಬಂತು ಶೂನ್ಯ ವಿದ್ಯುತ್ ಶುಲ್ಕ: ಇದಕ್ಕೆ ಕಾರಣ ಇಲ್ಲಿದೆ

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಹು ನಿರೀಕ್ಷಿತ ಯೋಜನೆ ‘ಮುಖ್ಯಮಂತ್ರಿ ಕಿರಯೇದಾರ್ ಬಿಜಲಿ ಮೀಟರ್ ಯೋಜನಾ’ ಅಡಿಯಲ್ಲಿ ರಾಷ್ಟ್ರ ರಾಜಧಾನಿಯ ಸುಮಾರು 26.60 ಲಕ್ಷ ಕುಟುಂಬಗಳಿಗೆ ನವೆಂಬರ್ ತಿಂಗಳಲ್ಲಿ ಶೂನ್ಯ ವಿದ್ಯುತ್ ಶುಲ್ಕ ಬಂದಿದೆ. ಈ ಯೋಜನೆ ಅಡಿಯಲ್ಲಿ 201 ಯುನಿಟ್ ಗಳಿಂದ 400 ಯುನಿಟ್ ಗಳವರೆಗಿನ ವಿದ್ಯುತ್ ಬಳಕೆಯ ಶುಲ್ಕದ ಮೇಲೆ ಸರಕಾರವು 50 ಪ್ರತಿಶತ ಸಬ್ಸಿಡಿಯನ್ನು ಒದಗಿಸುತ್ತದೆ. ಮತ್ತು 200 ಯುನಿಟ್ ಗಳವರೆಗಿನ ವಿದ್ಯುತ್ ಬಳಕೆ ಉಚಿತವಾಗಿರುತ್ತದೆ. ಪ್ರಾರಂಭದಲ್ಲಿ ಈ ಯೋಜನೆಯ ಪ್ರಯೋಜನವನ್ನು ಸ್ವಂತ ಮನೆ ಹೊಂದಿರುವವರಿಗೆ ಮಾತ್ರವೇ ನೀಡಲಾಗಿತ್ತು ಆದರೆ ಆ ಬಳಿಕ ಇದನ್ನು ಬಾಡಿಗೆದಾರ ಕುಟುಂಬಗಳಿಗೂ ವಿಸ್ತರಿಸಲಾಗಿತ್ತು. ಸೆಪ್ಟಂಬರ್2019 :  ನಗರದಲ್ಲಿರುವ ಒಟ್ಟು 52.27 ಲಕ್ಷ ಗೃಹೋಪಯೋಗಿ ವಿದ್ಯುತ್ ಗ್ರಾಹಕರಲ್ಲಿ ಸುಮಾರು 28 ಪ್ರತಿಶತ ಅಂದರೆ ಸುಮಾರು 14.64 ಲಕ್ಷ ಕುಟುಂಬಗಳಿಗೆ ಸೆಪ್ಟಂಬರ್ ತಿಂಗಳಲ್ಲಿ ಶೂನ್ಯ ವಿದ್ಯುತ್ ಶುಲ್ಕ ಬಂದಿದೆ ಎಂದು ಇಂಧನ ಇಲಾಖೆ ಬಿಡುಗಡೆಗೊಳಿಸಿರುವ ಮಾಹಿತಿ ತಿಳಿಸಲಾಗಿತ್ತು. ದೆಹಲಿಗೆ ಮೂರು ಪ್ರಮುಖ ವಿದ್ಯುತ್ ಪೂರೈಕೆ ಕಂಪೆನಿಗಳು ವಿದ್ಯುತ್ ಸೌಲಭ್ಯವನ್ನು ಒದಗಿಸುತ್ತಿವೆ ಮತ್ತು ದಕ್ಷಿಣ ಮತ್ತು ಪಶ್ಚಿಮ ದೆಹಲಿಯ ನಿವಾಸಿಗಳು ಈ ಯೋಜನೆಯ ಗರಿಷ್ಠ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಯೋಜನೆಯ ಕುರಿತಾಗಿ ಸೆಪ್ಟಂಬರ್ ನಲ್ಲಿ ಟ್ವೀಟ್ ಮೂಲಕ ಸಂತಸವನ್ನು

ಕೇಜ್ರಿವಾಲರಿಂದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ: ಕರ್ನಾಟಕದ ಮಾಜಿ ಸ್ಪೀಕರ್ ರಮೇಶ್ ಶ್ಲಾಘನೆ

ಕರ್ನಾಟಕದ ಮಾಜಿ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್‍ ರವರು ದೆಹಲಿ ಶಾಲೆಗಳ ಗುಣಮಟ್ಟವನ್ನು ನೋಡಿ ಸಂತೋಷಸಹಿತ ಆಶ್ಚರ್ಯ ವ್ಯಕ್ತಪಡಿಸಿ, ಅರವಿಂದ ಕೇಜ್ರಿವಾಲ್‍ರಂತಹ ಪ್ರಾಮಾಣಿಕ ನಾಯಕರ ಅಗತ್ಯ ದೇಶಕ್ಕಿದೆ ಎಂದಿದ್ದಾರೆ.  ಸಾರ್ವಜನಿಕ ಶಿಕ್ಷಣ ಕ್ಷೇತ್ರವು ಖಾಸಗೀಕರಣಗೊಂಡು ಖಾಸಗಿಯವರು ಮೇಲುಗೈ ಸಾಧಿಸಿದ್ದು, ಶಿಕ್ಷಣವನ್ನು ಮಾರಾಟದ ಸರಕನ್ನಾಗಿಸಿ ಮಾರಾಟಕ್ಕಿಟ್ಟಿರುವ ಸಂದರ್ಭದಲ್ಲಿ ಶಿಕ್ಷಣವು ಕೆಲವೇ ಕೆಲವು ಜನರ ಸ್ವತ್ತಾಗುತ್ತಿದೆ.  ಕೆಳವರ್ಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವ ಭಾರತದ ಶಿಕ್ಷಣ ವ್ಯವಸ್ಥೆಯ ಬಿಕ್ಕಟ್ಟನ್ನು ಬಗೆಹರಿಸಲು ಕೇವಲ ಶಿಕ್ಷಕರಿಂದ ಸಾಧ್ಯವಿಲ್ಲ. ಉತ್ತಮ ತರಬೇತಿ ಪಡೆದ ಶಿಕ್ಷಕರ ಜೊತೆಗೆ ದೂರದೃಷ್ಟಿಯುಳ್ಳ ಅಧಿಕಾರಿಗಳು, ರಾಜಕಾರಣಿಗಳು ಮತ್ತು ಸರ್ಕಾರವೂ ಕೈಜೋಡಿಸಬೇಕು. ಅಂತಹ ಮೌಲ್ಯಯುತವಾದ ಕೆಲಸವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಾಡಿದ್ದಾರೆ.  ಭಾರತದಂತಹ ದೇಶದಲ್ಲಿ ಸರ್ಕಾರವೊಂದು ಇಂತಹ ಅದ್ಭುತವಾದ, ಉತ್ತಮ ಗುಣಮಟ್ಟದ ಶಾಲೆಗಳನ್ನು ಕಟ್ಟಲು ಸಾಧ್ಯವೇ ಎಂದು ಆಶ್ಚರ್ಯವಾಯಿತು. ಖಾಸಗಿ ಶಾಲೆಗಳನ್ನು ಮೀರಿಸುವಂತಹ ಅತ್ಯುತ್ತಮ ದರ್ಜೆಗೆ ಸರ್ಕಾರಿ ಶಾಲೆಗಳನ್ನು ಏರಿಸಿದ್ದಾರೆ. ಬಡ ಮತ್ತು ಮಧ್ಯಮ ವರ್ಗದ ಕುಟುಂಬದಿಂದ ಬಂದ ಮಕ್ಕಳ ಬದುಕಿಗೆ ಅರ್ಥ ಕಲ್ಪಿಸಿದ್ದಾರೆ.  ಶಾಲೆಗಳಲ್ಲಿ ಶಿಕ್ಷಕರ ಬದ್ಧತೆ ಮತ್ತು ಮಕ್ಕಳ ಮೇಲೆ ಅವರಿಗಿರುವ ಕಾಳಜಿಯು ವಿದ್ಯಾರ್ಥಿಗಳಲ್ಲಿ ಕಲಿ